ಬರ್ಮ ತಂಗಡಿ - 
	ಫ್ಯಾಬೇಸೀ ಕುಟುಂಬದ ಸೀಸಾಲಾಪಿನೀ ಉಪಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಕ್ಯಾಸಿಯ ನೋಡೋಸ ಇದರ ವೈಜ್ಞಾನಿಕ ಹೆಸರು ಏಷ್ಯದ ಉಷ್ಣವಲಯ ದೇಶಗಳೇ ಇದರ ತವರು, ಬರ್ಮ, ಮಲೇಷ್ಯ, ಸಮಾತ್ರ, ಬೋರ್ನಿಯೊ, ಭಾರತ, ಚೀನಾಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

	ಇದು ಸುಮಾರು 6-10 ಮೀ ಎತ್ತರಕ್ಕೆ ಬೆಳೆಯುವ ಮರ. ಕಾಂಡದ ಮೇಲೆ ಅಲ್ಲಲ್ಲಿ ಗಂಟುಗಳಿವೆ. ಮುಖ್ಯ ಕಾಂಡದ ತುದಿಯಲ್ಲಿ ರೆಂಬೆಗಳು ಚಪ್ಪರದಂತೆ ಹರಡಿಕೊಂಡು ಬೆಳೆಯುವುವು. ಎಲೆಗಳು ಏಕಪಿಚ್ಛಕ ಸಂಯುಕ್ತಮಾದರಿಯವು. ಹೂಗಳು ದೊಡ್ಡಗಾತ್ರದ ಮಂಜರಿಗಳಲ್ಲಿ ಅರಳುವುವು. ಹೂ ಬಿಡುವ ಶ್ರಾಯ ಏಪ್ರಿಲ್-ಜೂನ್. ಬರ್ಮ ತಂಗಡಿಯನ್ನು ಬೀಜಗಳಿಂದ ವೃದ್ಧಿಸುವುದೇ ಸಾಮಾನ್ಯ ರೂಢಿ.
(ಎಮ್.ಎಚ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ